- ಮುನ್ನುಡಿ
- ಅಧ್ಯಕ್ಷರ ಕುರಿತು
- ಸಾಲದ ಕ್ಯಾಲ್ಕುಲೇಟರ್
ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ, ಸಹಕಾರಿ ಸಂಸ್ಥಾಪಕ
ಶ್ರೀ ರಾಘವೇಂದ್ರ ಡಿ. ನಾಯಕ, ದೇವರಬಾವಿ
ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಸಹಕಾರಿಯ ಸಂಸ್ಥಾಪಕ ರಾಘವೇಂದ್ರ ಡಿ. ನಾಯಕ ದೇವರಬಾವಿಯವರು ಗೋಕರ್ಣ ಹೋಬಳಿಯ ಅವಳಿ ಗ್ರಾಮವಾದ ತೊರ್ಕೆ, ದೇವರಬಾವಿಯ ಶಿಕ್ಷಕ ದಂಪತಿ ದಯಾನಂದ ಹಾಗೂ ಗೋದಾವರಿಯವರ ಕಿರಿಯ ಮಗ.
ರಾಘವೇಂದ್ರ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗೋಕರ್ಣದಲ್ಲಿ, ಬಾಹ್ಯ ಪದವಿಯನ್ನು ಅಂಕೋಲಾದಲ್ಲಿಯೂ ಮುಗಿಸಿದವರು. ರಾಘವೇಂದ್ರ ಅವರು ಹನ್ನೊಂದು ವರ್ಷವಿರುವಾಗಲೇ ತಾಯಿಯನ್ನು ಕಳೆದುಕೊಂಡರು. ಮುಂದೆ ಅಪ್ಪನ ಆರೈಕೆಯಲ್ಲಿ ಬೆಳೆದರು.
ಡಿಗ್ರಿ ಓದುವಾಗಲೇ 2002ರಲ್ಲಿ ಹುಬ್ಬಳ್ಳಿಯಲ್ಲಿ ಗೋದಾವರಿ ಇಂಡಸ್ಟ್ರೀಸ್ ಎಂಬ ಕೋಳಿ ಆಹಾರ ತಯಾರಿಕಾ ಘಟಕ ಆರಂಭಿಸಿದರು. ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮಿಯಾಗಿ, ಅಲ್ಲಿಯ ನುರಿತ ಉದ್ಯಮಿಗಳ ಪೈಪೋಟಿಯ ನಡುವೆ ತಮ್ಮನ್ನು ಗುರುತಿಸಿಕೊಂಡರು. 2006ರಲ್ಲಿ ಕಾರವಾರದ ಚೆಂಡಿಯಾದಲ್ಲಿ ಮುಂಬೈ ಮೂಲದವರ ಕೈಗಾರಿಕೆಯನ್ನು ಖರೀದಿಸಿ, ಅಲ್ಲಿಯೂ ಲೈಮ್ ಶೆಲ್ ಇಂಡಸ್ಟ್ರೀಸ್ ಎಂಬ ಕೋಳಿ ಆಹಾರ ತಯಾರಿಕೆ ಘಟಕ ಆರಂಭಿಸಿ ಯಶಸ್ವಿಯಾದರು.
2008ರಲ್ಲಿ ಹುಬ್ಬಳ್ಳಿಯಲ್ಲಿ ಗೋದಾವರಿ ಇನ್ಫ್ರಾ ಪ್ರೈ. ಲಿಮಿಟೆಡ್ ಎನ್ನುವ ಸಂಸ್ಥೆ ಕಟ್ಟಿ, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಪಾಲುದಾರಿಕೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದರು. 2010ರಲ್ಲಿ ಕೇಂದ್ರ ಸರಕಾರ “Highly polluted Waste Management Award” ಪ್ರಶಸ್ತಿಯನ್ನು ಈ ಸಂಸ್ಥೆಗೆ ನೀಡಿ ಗೌರವಿಸಿತು.
ತನ್ನ ತಾಯಿ ಹೆಸರನ್ನು ಸದಾ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ 2010ರಲ್ಲಿ ಗೋಕರ್ಣದಲ್ಲಿ ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಯನ್ನು ಆರಂಭಿಸಿ, ಸಂಸ್ಥಾಪಕ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದುಡ್ಡಿನ ಮೌಲ್ಯವನ್ನು ಅರಿತ ರಾಘವೇಂದ್ರ ನಾಯಕರು ತಾವು ಠೇವಣಿ ತಂದ ಒಂದು ರೂಪಾಯಿಗೂ ಒಂದು ಲಕ್ಷ ಮೇಲ್ಪಟ್ಟು ಮೌಲ್ಯ ನೀಡಿ ಸದ್ಬಳಕೆ ಮಾಡಿಕೊಂಡು ಸೈ ಎನಿಸಿಕೊಂದ್ದಾರೆ. ದೂರದೃಷ್ಟಿತ್ವ ಹೊಂದಿದ ರಾಘವೇಂದ್ರ ನಾಯಕ ದೇವರಭಾವಿ ಅವರು ಯಶಸ್ವಿ ಸಹಕಾರಿ ಧುರೀಣರೆನಿಸಿಕೊಂಡಿದ್ದಾರೆ.
2010ರಲ್ಲಿ ಗೋಕರ್ಣದಲ್ಲಿಯ ಮುಖ್ಯ ಕಚೇರಿಯನ್ನು ತೆರೆದು, 2012ರಲ್ಲಿ ಗೋಕರ್ಣ ಶಾಖೆ, 2013ರಲ್ಲಿ ಅಂಕೋಲಾ ಶಾಖೆ, 2015ರಲ್ಲಿ ಕಾರವಾರ ಶಾಖೆ, 2016ರಲ್ಲಿ ಕುಮಟಾ ಶಾಖೆ, 2020ರಲ್ಲಿ ಮಾದನಗೇರಿ ಹಾಗೂ 2021ರಲ್ಲಿ ಮಿರ್ಜಾನ ಶಾಖೆಗಳನ್ನು ಆರಂಭಿಸಿ ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಿದ್ದಾರೆ. ಎಲ್ಲ ಸಪ್ತ ಶಾಖಾ ಕ್ಷೇತ್ರಗಳಲ್ಲಿ ಅತ್ಯಂತ ಸುಸಜ್ಜಿತ ಕಟ್ಟಡ, ಕಂಪ್ಯೂಟರೀಕರಣ, ಆಧುನಿಕ ತಂತ್ರಜ್ಞಾನದೊಂದಿಗೆ ತಮ್ಮ ಸಹಕಾರಿಯ ಭವಿಷ್ಯವನ್ನೇ ಬದಲಾಯಿಸಿದ್ದಾರೆ.
ನಿವೃತ್ತ ಶಿಕ್ಷಕರು ಹಾಗೂ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ಪ್ರತಿ ವರ್ಷವೂ ಜನವರಿ 26 ಹಾಗೂ ಆಗಸ್ಟ್ 15ರಂದು ಸನ್ಮಾನ ಮಾಡಲಾಗುತ್ತದೆ. ಕಳೆದ 10 ವರ್ಷಗಳಿಂದ ಈ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಬಡವರಿಗೆ ಅಗತ್ಯ ನೆರವು ನೀಡಿದ್ದಾರೆ. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ತಮ್ಮ ಸಹಕಾರಿ ಕ್ಷೇತ್ರದಿಂದ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಸಾವಿರಾರು ಸೇವಾದಳದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ರಾಘವೇಂದ್ರ ಡಿ. ನಾಯಕ ದೇವರಬಾವಿ ಅವರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಶ್ರೇಷ್ಠ ಸಹಕಾರಿ ಪ್ರಶಸ್ತಿ ಅತಿ ಚಿಕ್ಕ ವಯಸ್ಸಿನಲ್ಲಿ ಹುಡುಕಿಕೊಂಡು ಬಂದಿದೆ.
ಪ್ರತಿ ಶಾಖೆಗಳಲ್ಲಿಯೂ ಸುಸಜ್ಜಿತ ಬ್ಯಾಂಕಿಂಗ್ ಸೌಕರ್ಯಗಳನ್ನು ಒದಗಿಸಿ, ಗ್ರಾಹಕರೊಂದಿಗೆ ಗೌರವ ಮತ್ತು ಆದರಪೂರ್ವಕವಾಗಿ ನಡೆದುಕೊಳ್ಳುವ ಸಂಸ್ಕೃತಿ ರೂಢಿಸಿದ್ದಾರೆ. ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
ಇತ್ತೀಚೆಗಷ್ಟೇ, ತನ್ನ ಹೆತ್ತಮ್ಮನ ಹೆಸರಿನಲ್ಲಿ, ಅವರ ಆಶಯದಂತೆ ಅತ್ಯಂತ ಸುಸಜ್ಜಿತವಾದ ಫೈವ್ ಸ್ಟಾರ್ ಹೋಟೆಲ್ಗಳಿಗೆ ಕಡಿಮೆ ಇಲ್ಲದ ತ್ರೀ ಸ್ಟಾರ್ ಹೋಟೆಲ್ನ್ನು ಗೋಕರ್ಣದ ಹೃದಯಭಾಗದಲ್ಲಿ ಆರಂಭಿಸಿದ್ದಾರೆ. ಪ್ರವಾಸಿಗರಿಗೆ ಸಸ್ಯಹಾರಿ ಆಹಾರದ ಆಪ್ತ ಸತ್ಕಾರ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ತನ್ನ ಸಂಸ್ಥೆಯ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಅಪರೂಪದ ಶ್ರೀಮಂತ ವಿನ್ಯಾಸ ಶೈಲಿ ಮತ್ತು ಸೌಕರ್ಯದ ಬೃಹತ್ ಹೋಟೆಲ್ ನೀಡಿದ ಗೋದಾವರಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ರೂವಾರಿ, ಗೋದಾವರಿ ಹೋಟೆಲ್ ಮಾಲಿಕ ರಾಘವೇಂದ್ರ ನಾಯಕ ದೇವರಬಾವಿ ಇಂದು ಜಿಲ್ಲೆಯಲ್ಲಿ ಯುವ ಜನಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.