ಸಂಸ್ಥೆಯ ಕುರಿತು ಮುಖ್ಯ ಕಾರ್ಯನಿರ್ವಾಹಕರ ಮಾತು 

ಶ್ರೀಯುತ ರಾಘವೇಂದ್ರ ನಾಯಕ ದೇವರಭಾವಿ ಇವರ ಸಾರಥ್ಯದಲ್ಲಿ ಶ್ರೀಯುತ ಪ್ರಕಾಶ ಗಾಂವ್ಕರ ಅವರ ಅಮ್ಮತ ಹಸ್ತದಿಂದ ದಿನಾಂಕ 12 ಸೆಪ್ಟೆಂಬರ್ 2010ರಂದು ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಗೋದಾವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಶುಭಾರಂಭಗೊಂಡಿತು. ಸಂಸ್ಥಾಪಕರಾದ ಶ್ರೀಯುತ ರಾಘವೇಂದ್ರ ದಯಾನಂದ ನಾಯಕ ಅಧ್ಯಕ್ಷರಾಗಿ, ಶ್ರೀಮತಿ ನೂತನ ಆರ್. ನಾಯಕ ವ್ಯವಸ್ಥಾಪಕ ನಿರ್ದೇಶಕರನ್ನೊಳಗೊಂಡ ನಿರ್ದೇಶಕ ಮಂಡಳಿಯ ರಚನೆಯಾಯಿತು. ಸಹಕಾರಿಯ ನಿಯಮದಂತೆ ವ್ಯವಸ್ಥಾಕರನ್ನೊಳಗೊಂಡಂತೆ ವಿವಿಧ ಹುದ್ದೆಗಳ ಸಿಬ್ಬಂದಿ ವರ್ಗವನ್ನು ನೇಮಿಸಿಕೊಳ್ಳಲಾಯಿತು. ಆಕರ್ಷಕ ಬಡ್ಡಿದರಗಳನ್ನು ನೀಡಿ, ಠೇವಣಿಗಳನ್ನು ಸಂಗ್ರಹಿಸಿ, ವಿವಿಧ ಸಾಲಗಳನ್ನು ನೀಡಿ, ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದಿ ಮುಂದುವರಿಯುತ್ತ, ಗೋದಾವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಈ ಸಂಸ್ಥೆಯನ್ನು ಗೋದಾವರಿ ಕ್ರೆಡಿಟ್ ಸೌಹಾರ್ದ ಕೋ ಆಪರೋಟಿವ್ ಲಿ. ಎಂದು 01-ಮಾರ್ಚ್ 2012ರಂದು ಪರಿವರ್ತನೆಗೊಂಡಿತು. ಸೌಹಾರ್ದ ಸಹಕಾರಿಗಳ ನಿಯಮಗಳನ್ನು ಅನುಸರಿಸಿ ದುಡಿಯವ ಬಂಡವಾಳದ ಆಧಾರದ ಮೇಲೆ ಸಂಸ್ಥೆಯ 3ನೇ ವರ್ಷಕ್ಕೆ ಪದಾರ್ಪಣೆ ಮಾಡುವ ಸುಸಂದರ್ಭದಲ್ಲಿ ಆಗಸ್ಟ್ 2013ರಲ್ಲಿ ಅಂಕೋಲಾ ಶಾಖೆಯನ್ನು ಪ್ರಾರಂಭಿಸುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಅಂಕೋಲಾ ಶಾಖೆಯು ಗ್ರಾಹಕರ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದಿ ಸೈ ಎನ್ನಿಸಿಕೊಂಡಿತು. ಸಂಸ್ಥೆಯ ಐದನೇ ವರ್ಷಕ್ಕೆ ಪದಾರ್ಪಣೆ ಮಾಡಿ 2015ರಂದು ಕಾರವಾರದಲ್ಲಿ ಶಾಖೆಯನ್ನು ಆರಂಭಿಸಿ, ಇದರ ಬೆನ್ನಲ್ಲೇ ಕುಮಟಾದಲ್ಲಿ ಏಪ್ರಿಲ್ 2016ರಂದು ಶಾಖೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಶಿಸ್ತಿಗೆ ಪ್ರಥಮ ಆದ್ಯತೆ ನೀಡುವ ಅಧ್ಯಕ್ಷರು ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿಗಳಿಗೂ ಸಮವಸ್ತ್ರವನ್ನು ನೀಡಿ ಕ್ರಿಯಾಶೀಲತೆಯಿಂದ ಕಾರ್ಯವನ್ನು ನಿರ್ವಹಿಸುವಂತೆ ಮಾಡಿದರು ಹಾಗೂ ಪ್ರತಿಯೊಂದು ಹಂತದಲ್ಲಿಯೂ ಸಂಸ್ಥೆಯ ಪ್ರಗತಿ ಮತ್ತು ದುಡಿಯುವ ಬಂಡವಾಳದ ಮೊತ್ತವನ್ನು ಅಧಿಕಗೊಳಿಸುವಲ್ಲಿ ಪ್ರಯತ್ನಿಸಲಾಯಿತು. ಈ ಯಶಸ್ಸಿನ ಪಥದಲ್ಲಿ ಜನವರಿ 2021 ರಂದು ಮಾದನಗೇರಿ ಶಾಖೆಯನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿ ತನ್ನ ಸಂಸ್ಥೆಯ ಶಾಖೆಯನ್ನು ಜುಲೈ 2022ರಲ್ಲಿ ಮಿರ್ಜಾನದಲ್ಲಿ ಆರಂಭಿಸಿ ಪ್ರಧಾನ ಕಚೇರಿಯನ್ನು ಒಳಗೊಂಡಂತೆ 6 ಶಾಖೆಯನ್ನು ಹೊಂದಿ ಪ್ರಗತಿಯತ್ತ ಮುನ್ನಡೆಯುತ್ತಿದೆ.

ಹೀಗೆ ಸಂಸ್ಥೆಯು ಅಭಿವೃದ್ಧಿ ಹೊಂದುತ್ತಾ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸಲು ಪ್ರಾರಂಭಿಸಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಸಮಾಜದ ವಿವಿಧ ಕ್ರೇತ್ರದಲ್ಲಿ ಸಾಧನೆಗೈದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ರೂಢಿಸಿಕೊಂಡು ಬಂದಿರುವುದು ನಮ್ಮ ಸಂಸ್ಥೆಯ ವಿಶೇಷ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಈ ಸುಂದರ ರೂಪುರೇಷೆಯನ್ನು ಹೊಂದಿದ ಸಂಸ್ಥೆಯು ಕಾರ್ಮಿಕ ದಿನಾಚರಣೆಯಂದು ಸಿಬ್ಬಂದಿ ಕಾರ್ಯಚಟುವಟಿಕೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಸಮಾರಂಭವು ಜಾರಿಯಲ್ಲಿರುವುದು ನಮ್ಮ ಅಧ್ಯಕ್ಷರು ಸಿಬ್ಬಂದಿ ಶ್ರಮಕ್ಕೆ ನೀಡುವ ಗೌರವವಾಗಿದೆ. ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ ನಮ್ಮ ಗೋದಾವರಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಸಾರಥ್ಯ ವಹಿಸಿದ ನಮ್ಮ ಮಾರ್ಗದರ್ಶಕರಾದ ನಮ್ಮ ಅಧ್ಯಕ್ಷರ ನೇತೃತ್ವದಲ್ಲಿ ಕಡಿಮೆ ಅವಧಿಯಲ್ಲಿ ನೂರಾರು ಕೋಟಿಗೂ ಅಧಿಕ ದುಡಿಯವು ಬಂಡವಾಳವನ್ನು ಹೊಂದಿರುವುದು ಸಂಸ್ಥೆಯ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.

ಹದಿಮೂರು ವರ್ಷಗಳನ್ನು ದಾಟಿ ಹದಿನಾಲ್ಕನೇ ವಸಂತಕ್ಕೆ ಪದಾರ್ಪಣೆ ಮಾಡುವ ಈ ಶುಭ ಸಂದರ್ಭದಲ್ಲಿ ನಮ್ಮ ಸಂಸ್ಥೆಗೆ 2023-24ನೇ ಸಾಲಿನ ಶ್ರೇಷ್ಠ ಸಹಕಾರಿ ಪ್ರಶಸ್ಸಿ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಪ್ರಗತಿಯತ್ತ ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಗೆ ಸಹಕರಿಸಿದ ನಮ್ಮ ಅಧ್ಯಕ್ಷರಿಗೆ, ಆಡಳಿತ ಮಂಡಳಿ ವರ್ಗಕ್ಕೆ, ಆತ್ಮೀಯ ಗ್ರಾಹಕರಿಗೆ, ನಮ್ಮೆಲ್ಲ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲ ಸೇವೆಯನ್ನು ನಿರ್ವಹಿಸಲು ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.

ನಮ್ಮ ಸಹಕಾರಿ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ನಾನು ಹಾಗೂ ನಮ್ಮ ಸಿಬ್ಬಂದಿ ವರ್ಗ ಮುಂದುವರಿಯುತ್ತೇವೆ.